ಹುಲಿಗೆ ಚಳ್ಳೆಹಣ್ಣು ತಿನಿಸಿದ ಬುದ್ದಿವಂತ ಬಾತುಕೋಳಿ - ವೈರಲ್ ವಿಡಿಯೋ ನೋಡಿ

ಬಾತುಕೋಳಿಯ ಸಮಯಪ್ರಜ್ಞೆಯಿಂದ ಹಾಗು ಬುದ್ದಿವಂತಿಕೆಯಿಂದ ಹುಲಿಗೆ ತಾನು ಆಹಾರವಾಗುವುದರಿಂದ ಬಚಾವಾಗಿದೆ. ವಿಡಿಯೋ ಇದೀಗ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.

ನಾವು ವೀಡಿಯೊದಲ್ಲಿ ನೋಡಬಹುದು, ಹುಲಿ ಸದ್ದು ಮಾಡದೇ ಬಾತುಕೋಳಿಯ ಹಿಂಭಾಗದಿಂದ ಬಾತುಕೋಳಿಯ ಮೇಲೆ ಆಕ್ರಮಣ ಮಾಡಲು ಬರುತ್ತದೆ. ಆದರೆ ಹುಲಿ ದಾಳಿ ಮಾಡಲು ತಯಾರಾಗುತ್ತಿದ್ದಂತೆಯೇ, ಬಾತುಕೋಳಿ ನೀರಿನ ಕೆಳಗೆ ಮಾಯವಾಗುತ್ತದೆ. ಹುಲಿ ಹುಡುಕುತ್ತಲೇ ಇರುವುದರಿಂದ ಬಾತುಕೋಳಿ ಬೇರೆ ದಿಕ್ಕಿನಲ್ಲಿ ಈಜಿಕೊಂಡು ಹೋಗುತ್ತದೆ.

ಈ ವೀಡಿಯೊ ಈಗಾಗಲೇ 2018 ರಲ್ಲಿ ವೈರಲ್ ಆಗಿತ್ತು ಈಗ ಮತ್ತೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. @Buitengebieden_ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ