ಮನೆ ಮಹಡಿಯ ಮೇಲೆ ಸಿಲುಕಿಕೊಂಡ ನಾಯಿಯನ್ನು ರಕ್ಷಿಸುವ ವಿಡಿಯೋ

ಒಂದು ದಿನ, ಅರಿಜೋನಾ ಹ್ಯೂಮನ್ ಸೊಸೈಟಿ ಅವರು ಫೋನ್ ಕರೆ ಒಂದನು ಸ್ವೀಕರಿಸಿದರು. ದಾರಿತಪ್ಪಿ ಪಿಟ್ ಬುಲ್ ನಾಯಿಮರಿ ಯಾರೊಬ್ಬರ ಮನೆಯ ಮೇಲೆ ಸಿಲುಕಿಕೊಂಡಿದೆ ಮತ್ತು ಅದನ್ನು ರಕ್ಷಿಸಬೇಕಾಗಿದೆ.

ನೆರೆಹೊರೆಯ ಯಾರೋ ನಾಯಿಮರಿ ಮನೆಯ ಮೇಲೆ ಇರುವುದನ್ನು ಗಮನಿಸಿದ್ದರು. ಅವರು ಬೇಗನೆ ಅರಿಜೋನಾ ಹ್ಯೂಮನ್ ಸೊಸೈಟಿ ತುರ್ತು ಅನಿಮಲ್ ಮೆಡಿಕಲ್ ಟೆಕ್ನಿಷಿಯನ್‌ಗಳನ್ನು ಸಂಪರ್ಕಿಸಿದರು. ಮನೆಯ ಮಹಡಿಯ ಮೇಲೆ ನಾಯಿ ಹೇಗೆ ಹತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ.

ತುರ್ತು ಅನಿಮಲ್ ಮೆಡಿಕಲ್ ಟೆಕ್ನಿಷಿಯನ್‌ಗಳಾದ ಜೆನ್ನಾ ಮೊಫಿಟ್ ಮತ್ತು ಆಂಡಿ ಗಲ್ಲೊ ಕರೆಗೆ ಸ್ಪಂದಿಸಿದರು ಮತ್ತು ನಾಯಿಯನ್ನು ರಕ್ಷಿಸಲು ಹೊರಟರು. ನಾಯಿಯನ್ನು ಸಹಾಯ ಮಾಡಲು ರಕ್ಷಕರು ಬರುತ್ತಿರುವುದನ್ನು ನೋಡಿ ನಾಯಿಗೆ ಸಂತೋಷವಾಯಿತು.