ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರೆ

ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮತ್ತು ಭಾರತದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.



""Thanks a lot for ur love and support throughout.from 1929 hrs consider me as Retired" ಎಂಎಸ್ ಧೋನಿ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದರೆ.

ಮ್ಯಾಂಚೆಸ್ಟರ್ ಓಲ್ಡ್ ಟ್ರಾಫರ್ಡ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2019 ಸೆಮಿಫೈನಲ್ ಪಂದ್ಯದಲ್ಲಿ ಧೋನಿ ಅವರು ಕೊನೆಯ ಬಾರಿಗೆ ಭಾರತ ಪರ ಆಡಿದ್ದು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೆಲ್ಬೋರ್ನ್ ಟೆಸ್ಟ್ ನಂತರ ಧೋನಿ ಹಿಂದೆ 2014 ರಲ್ಲಿ ಟೆಸ್ಟ್ ಕ್ರಿಕೆಟ್ ತೊರೆದಿದ್ದರು ಮತ್ತು ಏಕದಿನ ಮತ್ತು ಟಿ 20 ನಾಯಕತ್ವವನ್ನು ವಿರಾಟ್ ಕೊಹ್ಲಿ ಅವರಿಗೆ 2017 ಜನವರಿಯಲ್ಲಿ ಹಸ್ತಾಂತರಿಸಿದ್ದರು

ಧೋನಿ ತಮ್ಮ ಅತ್ಯಂತ ಯಶಸ್ವಿ ನಾಯಕತ್ವದ ಮೂಲಕ ಭಾರತವನ್ನು ಮುನ್ನಡೆಸಿದರು ಮತ್ತು 2007 ಟಿ 20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ತಮ್ಮ ಸಂಪುಟದಲ್ಲಿ ಹೊಂದಿದ್ದಾರೆ.

ಧೋನಿ 350 ಏಕದಿನ ಪಂದ್ಯಗಳು ಮತ್ತು 98 ಟಿ 20 ಅಂತರರಾಷ್ಟ್ರೀಯ ಪಂದ್ಯಗಳು ಆಡಿದ್ದಾರೆ

350 ಏಕದಿನ ಪಂದ್ಯಗಳಲ್ಲಿ ಧೋನಿ 50.57 ಸರಾಸರಿಯಲ್ಲಿ 10773 ರನ್ ಗಳಿಸಿದ್ದರೆ. ಅವರ ಹೆಸರಿಗೆ 10 ಶತಕಗಳು ಮತ್ತು 73 ಅರ್ಧಶತಕಗಳಿವೆ

ಎರಡು ಅರ್ಧಶತಕಗಳನ್ನು ಒಳಗೊಂಡಂತೆ ಧೋನಿ 98 ಟಿ 20 ಐಗಳಲ್ಲಿ 37.60 ಸರಾಸರಿಯಲ್ಲಿ 1617 ರನ್ ಗಳಿಸಿದ್ದಾರೆ.