ಐಪಿಎಲ್ 2020 ಯುಎಇಯಲ್ಲಿ ನಡೆಯಲಿದೆ - ಪೂರ್ಣ ಸುದ್ದಿ ಓದಿ

ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಅವರು ಯುಎಇಯಲ್ಲಿ 2020 ಐಪಿಎಲ್ ಆವೃತ್ತಿಯನ್ನು ನಡೆಸಲಿದೆ ಎಂದು cricbuzz ಗೆ ದೃಢ ಪಡಿಸಿದ್ದಾರೆ.

Photo: twitter/IPL

ಯುಎಇಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಅನುಮತಿ ಕೋರಿ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ "ಎಂದು ಬ್ರಿಜೇಶ್ ಪಟೇಲ್ cricbuzz ಗೆ ತಿಳಿಸಿದ್ದಾರೆ.

ಮಾರ್ಚ್ 2020 ರ ಕೊನೆಯಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಾವಳಿ, ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಯುಎಇ ಮತ್ತು ಶ್ರೀಲಂಕಾದ ಕ್ರಿಕೆಟ್ ಮಂಡಳಿಗಳು ಲೀಗ್‌ಗೆ ಆತಿಥ್ಯ ವಹಿಸಲು ಆಸಕ್ತಿ ತೋರಿಸಿದರು.