ಕಪ್ಪು ಕರಡಿಯೊಂದಿಗೆ ಸೆಲ್ಫಿ ಕ್ಲಿಕ್ ಮಾಡಿದ ಮಹಿಳೆಯ ವಿಡಿಯೋ ಇದೀಗ ವೈರಲ್ ಆಗಿದೆ

ಮೆಕ್ಸಿಕೋದ ಚಿಪಿಂಕ್ ಪರಿಸರ ಉದ್ಯಾನವನದಲ್ಲಿ ಹೈಕಿಂಗ್ಗಾಗಿ ತೆರಳಿದ್ದ ಮಹಿಳೆಯೊಬ್ಬರು ಕಪ್ಪು ಕರಡಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.

ಯುವತಿ ತನ್ನ ಸ್ನೇಹಿತರೊಂದಿಗೆ ಹೈಕಿಂಗ್ಗಾಗಿ ತೆರೆಳಿದಾಗ, ಹಿಂದಿನಿಂದ ಬಂದ ಕಪ್ಪು ಕರಡಿಯನ್ನು ವೀಡಿಯೊದಲ್ಲಿ ನೋಡಬಹುದು. ಕರಡಿ ನಂತರ ಅದರ ಕಾಲುಗಳ ಮೇಲೆ ನಿಂತುಕೊಳ್ಳುತ್ತದೆ. ಯುವತಿ ತನ್ನ ಕ್ಯಾಮೆರಾವನ್ನು ತೆಗೆದುಕೊಂಡು ಕರಡಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದನ್ನು ನಾವು ವಿಡಿಯೋದಲ್ಲಿ ಗಮನಿಸಬಹುದು.

ಮಹಿಳೆ ಮತ್ತು ಅವರ ಸ್ನೇಹಿತರನ್ನು ಕಾಡು ಪ್ರಾಣಿ ತಮ್ಮ ಹತ್ತಿರದಲ್ಲಿದ್ದರೂ ಭಯಪಡದೆ ಶಾಂತವಾಗಿದಿದರಿಂದ ಸೋಶಿಯಲ್ ಮೀಡಿಯಾದಲ್ಲಿ ಜನರು ಪ್ರಶಂಸೆ ವೆಕ್ತಪಡಿಸಿದರೆ.